www.karnatakatemplesaccommodation.com is the only official Karnataka Government website for booking accommodations near temples. Payments must be made only via the website's payment gateway. Avoid paying anyone directly, especially by transferring payment
www.karnatakatemplesaccommodation.com is the only official Karnataka Government website for booking accommodations near temples. Payments must be made only via the website's payment gateway. Avoid paying anyone directly, especially by transferring payment
www.karnatakatemplesaccommodation.com is the only official Karnataka Government website for booking accommodations near temples. Payments must be made only via the website's payment gateway. Avoid paying anyone directly, especially by transferring payment

ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ವಸತಿ ಗೃಹ, ದೇವರಾಯನದುರ್ಗ, ತುಮಕೂರು

  • ವರ್ಷದೊಳಗಿನ ಮಕ್ಕಳಿಗೆ ನ್ನು ಉಚಿತವಾಗಿ ಅನುಮತಿಸಲಾಗಿದೆ, ಆದರೆ 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವಯಸ್ಕರಿಗೆ ಶುಲ್ಕ ವಿಧಿಸಲಾಗುತ್ತದೆ.
  • ಪ್ರತಿ ಕೋಣೆಯಲ್ಲಿ ಇಬ್ಬರು ವಯಸ್ಕರು ಮತ್ತು ಒಂದು ಮಗುವಿಗೆ ಅವಕಾಶ ಕಲ್ಪಿಸಬಹುದು.
  • ಬಳಕೆದಾರರು ಗರಿಷ್ಠ 2 ಕೊಠಡಿಗಳನ್ನು ಬುಕ್ ಮಾಡಬಹುದು ಮತ್ತು ಗರಿಷ್ಠ 3 ದಿನಗಳವರೆಗೆ ಕೊಠಡಿಗಳನ್ನು ಬುಕ್ ಮಾಡಬಹುದು.
  • ಮರುಪಾವತಿ ಇಲ್ಲ ಮತ್ತು ರದ್ದತಿ ಇಲ್ಲ
  • ಕೊಠಡಿಗಾಗಿ ಮುಂಗಡ ಠೇವಣಿಯನ್ನು ನಗದು ರೂಪದಲ್ಲಿ ಸಂದಾಯ ಮಾಡಿ, ವ್ಯವಸ್ಥಾಪಕರಿಂದ ಪುನಃ ಮುಂಗಡ ಠೇವಣಿ ಹಣವನ್ನು ನಗದು ರೂಪದಲ್ಲಿ ಪಡೆದು ಈ ಬಗ್ಗೆ ಖಚಿತಪಡಿಸಿಕೊಳ್ಳುವುದು.
  • ಕೊಠಡಿಯೊಳಗೆ ಯಾವುದೇ ಆಹಾರ ಪದಾರ್ಥವನ್ನು ಒಯ್ಯವಂತಿಲ್ಲ.
  • ಯಾವುದೇ ಸರ್ಕಾರಿ ತುರ್ತು ಸಂದರ್ಭದಲ್ಲಿ, ಕೊಠಡಿ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ನಾವು ನಿಮ್ಮ ಹಣವನ್ನು ಮರುಪಾವತಿ ಮಾಡುತ್ತೇವೆ.
  • ಬೆಳಿಗ್ಗೆ 09:00 ರಿಂದ ಚೆಕ್-ಇನ್, ಮರುದಿನ 09:00 ರವರೆಗೆ ಚೆಕ್ಔಟ್ ಸಮಯ.

ದೇವಾಲಯದ ಬಗ್ಗೆ:
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದ್ದು, ಇದು ತುಮಕೂರು ನಗರದಿಂದ ಸುಮಾಋು 15 ಕಿಲೋಮೀಟರ್ ದೂರದಲ್ಲಿರುವ ದೇವರಾಯನದುರ್ಗದ ಗುಡ್ಡಗಾಡು ಪ್ರದೇಶದಲ್ಲಿ ನೆಲೆಗೊಂಡಿರುತ್ತವೆ.  ಇದು ಅತ್ಯಂತ ಜನಪ್ರಿಯ ಮತ್ತು ಪ್ರಾಚೀನ ನರಸಿಂಹ ದೇವಾಲಯಗಳಲ್ಲಿ ಒಂದಾಗಿದೆ. ನರಸಿಂಹ ದೇವರಿಗೆ ಎರಡು ದೇವಾಲಯಗಳನ್ನು ನಿರ್ಮಿಸಲಾಗಿದೆ, ಒಂದನ್ನು ಶ್ರೀ ಭೋಗಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ ಮತ್ತು ಇನ್ನೊಂದು ದೇವಾಲಯ ಬೆಟ್ಟದ ಮೇಲೆ ತುದಿಯಲ್ಲಿ ಇದ್ದು, ಇದನ್ನು ಯೋಗಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ.

ಈ ದೇವಾಲಯವು 2000 ವರ್ಷಗಳಷ್ಟು ಹಳೆಯದಾಗಿದ್ದು, ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಭೋಗಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯವನ್ನು ದೂರ್ವಾಸ ಮಹಾಮುನಿಯು ಹಲವಾರು ವರ್ಷಗಳ ಕಾಲ ತಪಸ್ಸಿನಿಂದ ಸ್ಥಾಪಿಸಿದನೆಂದು ಭಕ್ತರ ನಂಬಿಕೆಯಾಗಿದೆ. ಬೆಟ್ಟದ ಮೇಲಿರುವ ಶ್ರೀ ಯೋಗಲಕ್ಷ್ಮಿ ನರಸಿಂಹಸ್ವಾಮಿಯ ಪುರಾತನದಾಗಿದ್ದು, ಇದನ್ನು ಬ್ರಹ್ಮ ದೇವರಿಂದ ಸ್ಥಾಪನೆಯಾಗಿದೆ ಎಂದು ಹೇಳಲಾಗುತ್ತದೆ. ದ್ವಾಪರ ಯುಗದಲ್ಲಿ ಶ್ರೀ ವಿಷ್ಣುವಿನ ಹೆಸರಿನಲ್ಲಿ ಹಲವಾರು ವರ್ಷಗಳ ಕಾಲ ತಪಸ್ಸು ಮಾಡಿದನೆಂದು ಮತ್ತು ಈ ಭಗವಾನ್ ವಿಷ್ಣುವು ಇಲ್ಲಿ ನರಸಿಂಹನಾಗಿ ಅವತರಿಸಿದನೆಂದು ನಂಬಲಾಗಿದೆ.

ಲಭ್ಯವಿರುವ ಸೌಲಭ್ಯಗಳು:
1. ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಕರಿಗಿರಿ ವಸತಿಗೃಹವನ್ನು ನಿರ್ಮಿಸಲಾಗಿದೆ. ಈ ಅತಿಥಿ ಗೃಹವು 16 ಸಾಮಾನ್ಯ ಕೊಠಡಿಗಳನ್ನು ಹೊಂದಿದ್ದು, ಕೊಠಡಿಗಳಲ್ಲಿ ಶೌಚಾಲಯ ಮತ್ತು ಸ್ನಾನದ ಕೋಣೆಗಳ ವ್ಯವಸ್ಥೆ ಇರುತ್ತದೆ ಮತ್ತು 24 ಗಂಟೆಗಳ ನೀರು ಸರಬರಾಜು ಸೌಲಭ್ಯ ಮತ್ತು ಶುದ್ದ ಕುಡಿಯವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.  ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.ಒಟ್ಟು ಕೊಠಡಿಗಳ ಸಂಖ್ಯೆ – 16

Google Map Link to Address: https://goo.gl/maps/XPbGse2DzgigP7Nz7
Contact Number: 9141840060
Email id: [email protected]

2. ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿದೆ. ಅತಿಥಿ ಗೃಹವು 12 ಸಾಮಾನ್ಯ ಕೊಠಡಿಗಳನ್ನು ಹೊಂದಿದ್ದು, ಕೊಠಡಿಗಳಲ್ಲಿ ಶೌಚಾಲಯ ಮತ್ತು ಸ್ನಾನದ ಕೋಣೆಗಳು, ಬಿಸಿ ನೀರು ಪೂರೈಕೆ ಸೌಲಭ್ಯ ಇತ್ಯಾದಿಗಳನ್ನು ಹೊಂದಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.

Google Map Link to Address: https://goo.gl/maps/JocFuDqHs8riFupFA
Total No. of Rooms - 12
Contact Number: 9141840060
Email id: [email protected]

ದೇವರಾಯನದುರ್ಗಕ್ಕೆ ಸಮೀಪದಲ್ಲಿರುವ ಪ್ರವಾಸಿ ತಾಣಗಳು.
ನಾಮದ ಚಿಲುಮೆ (6 km)
ಗೊರವನಹಳ್ಳಿ (20.6 km)
ನಿಜಗಲ್ ಬೆಟ್ಟ (21.6 km)
ಕೈದಾಳ ಶ್ರೀ ಚೆನ್ನಕೇಶವ ಸ್ವಾಮಿ ಟೆಂಪಲ್ (24.1 km)
ಮತ್ತು ಇತರೆ.

ವಿಳಾಸ: ಅಡ್ರೆಸ್: ಕರಿಗಿರಿ ವಸತಿಗೃಹ ಮೊದಲನೇ ಮಹಡಿ,ದಾಸೋಹ ಭವನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಕ್ಷೇತ್ರ,ದೇವರಾಯನದುರ್ಗ,ಉಡಿಗೆರೆ ಹೋಬಳಿ,ತುಮಕೂರು

ದೂರವಾಣಿ: +9 91418 40060

ಇಮೇಲ್: [email protected]