ದೇವಾಲಯದ ಬಗ್ಗೆ:
ಅಂಧ್ರಪ್ರದೇಶದ ಮಂತ್ರಾಲಯ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಛತ್ರವಿದ್ದು, ಇದನ್ನು ಕರ್ನಾಟಕ ರಾಜ್ಯದಿಂದ ಮಂತ್ರಾಲಯ ಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿಯವರ ದರ್ಶನಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ತಂಗಲು ಮತ್ತು ಇತರ ಸೇವೆಗಳನ್ನು ನೀಡುವ ಮೂಲಕ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಸಹಾಯ ಮಾಡಲು ನಿರ್ಮಿಸಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
ರಾಜ್ಯ ಛತ್ರದ ಸೌಲಭ್ಯದ ಬಗ್ಗೆ:
ಮಂತ್ರಾಲಯದಲ್ಲಿರುವ ಕರ್ನಾಟಕ ರಾಜ್ಯ ಛತ್ರವು ಹಳೆಯ ಕಟ್ಟಡವಾಗಿದ್ದು, ಇದನ್ನ 1984 ರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ನಿರ್ಮಿಸಲಾಗಿರುತ್ತದೆ. ಮತ್ತು ಹೊಸ ಕಟ್ಟಡವನ್ನು 2022 ರಲ್ಲಿ ಉದ್ಘಾಟಿಸಲಾಯಿತು.ಹಳೆಯ ಕಟ್ಟಡವು ಒಟ್ಟು 52 ಕೊಠಡಿಗಳನ್ನು ಹೊಂದಿದೆ: 04 ವಿವಿಐಪಿ ಕೊಠಡಿಗಳು, 11 ಎಸಿ ಕೊಠಡಿಗಳು, 13 ಡೀಲಕ್ಸ್ ಕೊಠಡಿಗಳು ಮತ್ತು 24 ಸಾಮಾನ್ಯ ಕೊಠಡಿಗಳನ್ನು ಹೊಂದಿದ್ದು, ಹೊಸ ಕಟ್ಟಡದಲ್ಲಿ ಒಟ್ಟು 50 ಕೊಠಡಿಗಳನ್ನು ಹೊಂದಿದೆ: 10 ಎಸಿ ಕೊಠಡಿಗಳು, 30 ಎಸಿ ಡೀಲಕ್ಸ್ ಕೊಠಡಿಗಳು ಮತ್ತು 10 ನಾನ್ ಎಸಿ ಡೀಲಕ್ಸ್ ಕೊಠಡಿಗಳು. ಎಲ್ಲಾ ಕೊಠಡಿಗಳಲ್ಲಿ ಶೌಚಾಲಯ ಮತ್ತು ಸ್ನಾನಗೃಹಗಳಿದ್ದು, 24 ಗಂಟೆಗಳ ನೀರು ಸರಬರಾಜು ಹಾಗೂ ಶುದ್ಧ ಕುಡಿಯುವ ನೀರು ಇತ್ಯಾದಿಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
Google Map Link to Address: https://goo.gl/maps/2WVntbfReUrEDXjE9
ಅಡ್ರೆಸ್: ಕರ್ನಾಟಕ ರಾಜ್ಯ ಛತ್ರ, ನಿಯರ್ ಅಬೊಡೆ ಹೋಟೆಲ್, ರಾಯಚೂರ್ ರೋಡ್ ,ಮಂತ್ರಾಲಯ, ಅಂಧ್ರ ಪ್ರದೇಶ
+91 63636 12501