ದೇವಾಲಯದ ಬಗ್ಗೆ:
ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನವು ರಾಮನಗರದಿಂದ 10 ಕಿಮೀ ದೂರದಲ್ಲಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜನಪ್ರಿಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಸ್ಥಳೀಯವಾಗಿ ನಂಬಿರುವ ಇತಿಹಾಸದ ಪ್ರಕಾರ, ಹನುಮಂತನ ವಿಗ್ರಹವು ಕೆಂಪು ಕಲ್ಲಿನ ಬಂಡೆಗಳಿಂದ ಕೂಡಿದ್ದು, ಸುಮಾರು 1,000 ವರ್ಷಗಳ ಹಿಂದೆ ಮಹಿರ್ಷಿಗಳು ಈ ಸ್ಥಳವನ್ನು ಹಾದು ಹೋಗುತ್ತಿದ್ದಾಗ, ಅವರು ಹನುಮಂತ ದೇವರಂತೆ ಕೆಂಪು ಕಲ್ಲು ಬಂಡೆಯಲ್ಲಿ ಕೆತ್ತಲಾದ ಪ್ರಕಾಶಮಾನವಾದ ಕೆಂಪು ಕಲ್ಲಿನ ಬಂಡೆಯನ್ನು ನೋಡಲಾಗಿ, ಅವರು ಕೆಂಪು ಬಂಡೆಯಲ್ಲಿ ಕಂಡ ಹನುಮಂತನನ್ನು ದರ್ಶಿಸಿದ್ದರೆಂದು, ಅನಂತರ ಸರ್ವವ್ಯಾಪಿಯಾದ ಭಗವಾನ್ ಹನುಮಂತನು ವ್ಯಾಸರಾಯರ ಅಪೇಕ್ಷೆಯಂತೆ ನಿಧಾನವಾಗಿ ಬಂಡೆಯಿಂದ ಹೊರಬರುವ ಮೂಲಕ ವ್ಯಾಸರಾಯರ ಇಷ್ಟಾರ್ಥಗಳನ್ನು ಪೂರೈಸಿದನೆಂಬುದು ಭಕ್ತರ ನಂಬಿಕೆಯಾಗಿದೆ. "ಕೆಂಗಲ್" ಎಂಬ ಪದವು "ಕೆಂಪು ಕಲ್ಲು" ಎಂಬ ಪದದಿಂದ ರೂಪುಗೊಂಡಿದೆ ಕನ್ನಡದಲ್ಲಿ "ಕೆಂಪು ಬಂಡೆ", ಆದ್ದರಿಂದ ಇದನ್ನು ಕೆಂಗಲ್ ಎಂದು ಆಂಜನೇಯನಾಗಿರುವುದರಿಂದ ಹನುಮಂತನೆಂದು ಒಟ್ಟಾರೆ ಕೆಂಗಲ್ ಹನುಮಂತರಾಯಸ್ವಾಮಿ ಎಂದು ಕರೆಯಲಾಗುತ್ತದೆ.
ಈ ದೇವಾಲಯವನ್ನು ಹೊಯ್ಸಳ ರಾಜರು ನಿರ್ಮಿಸಿದ್ದಾರೆಂದು ನಂಬಲಾಗಿದೆ ಆದರೆ ಅವರ ಯುಗದ ನಂತರ, ದೇವಾಲಯವು ಬಹುತೇಕ ಶಿಥಿಲಾವಸ್ಥೆ ಹೊಂದಿದ್ದ ಕಾರಣ ಕೆಲವು ದಶಕಗಳ ಹಿಂದೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಕಂಗಲ್ ಹನುಮಂತಯ್ಯ ರವರಿಂದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಈ ದೇವಾಲಯದ ಬಗ್ಗೆ ಒಂದು ಆಕರ್ಷಕ ವಿದ್ಯಮಾನವೆಂದರೆ ದೇವರು ವರ್ಷಗಟ್ಟಲೆ ತನ್ನ ಮುಖವನ್ನು ಸ್ವಲ್ಪ ತಾನು ತಿರುಗಿಸಿಕೊಳ್ಳುತ್ತಿರುವಂತೆ ತೋರುತ್ತದೆ. ಕೆಲವು ದಶಕಗಳ ಹಿಂದೆ, ಅವರು ಉತ್ತರ ದಿಕ್ಕಿಗೆ ಕೆಲವು ವರ್ಷಗಳಲ್ಲಿ ಪೂರ್ವ ದಿಕ್ಕಿಗೆ (ನೇರವಾಗಿ) ನೋಡುತ್ತಾರೆ ಎಂಬಂತೆ ಭಾಸವಾಗುತ್ತದೆ. ಇಲ್ಲಿ ಬರುವ ಭಕ್ತರಿಗೆ ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಮತ್ತು ಇನ್ನಿತರ ಅನಾರೋಗ್ಯದಿಂದ ಬಳಲುವ ಜನರಿಗೆ ಪರಿಹಾರಕ್ಕಾಗಿ ಬರುವ ಭಕ್ತರಿಗೆ ಜನಪ್ರಿಯ "ಪ್ರಾರ್ಥನಾ ಸ್ಥಳ" ಆಗಿದೆ.
ಲಭ್ಯವಿರುವ ಸೌಲಭ್ಯಗಳು:
ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಯಾತ್ರಿ ನಿವಾಸವನ್ನು 2019-20 ನೇ ಸಾಲಿನಲ್ಲಿ ನಿರ್ಮಿಸಲಾಗಿದೆ. ಯಾತ್ರಿ ನಿವಾಸವು ಮುಖ್ಯ ದೇವಾಲಯದಿಂದ 100 ಮೀಟರ್ ದೂರದಲ್ಲಿದೆ. ಯಾತ್ರಿ ನಿವಾಸದಲ್ಲಿ ಒಟ್ಟು 14 ಕೊಠಡಿಗಳಿವೆ: 2 ಎಸಿ ಕೊಠಡಿಗಳು, 04 ನಾನ್ ಎಸಿ ಎಕ್ಸಿಕ್ಯೂಟಿವ್ ಕೊಠಡಿಗಳು ಮತ್ತು 08 ಸಾಮಾನ್ಯ ಕೊಠಡಿಗಳು. ಎಸಿ ಮತ್ತು ನಾನ್ ಎಸಿ ಎಕ್ಸಿಕ್ಯೂಟಿವ್ ಕೊಠಡಿಗಳಲ್ಲಿ ಎರಡು ಕಾಟ್ ಬೆಡ್ ಸೌಲಭ್ಯವಿದ್ದು, ಸಾಮಾನ್ಯ ಕೊಠಡಿಗಳಲ್ಲಿ ಬೆಡ್ ಸೌಲಭ್ಯವಿರುವುದಿಲ್ಲ. ಎಲ್ಲಾ ಕೊಠಡಿಗಳಲ್ಲಿ ಶೌಚಾಲಯ ಮತ್ತು ಸ್ನಾನ ಕೋಣೆಗಳ ವ್ಯವಸ್ಥೆವಿರುತ್ತವೆ, 24 ಗಂಟೆಗಳ ನೀರು ಸರಬರಾಜು ಮತ್ತು ವಿದ್ಯುತ್ (ಯುಪಿಎಸ್ ಸಹಿತ) ಪೂರೈಕೆ, ಬಿಸಿ ನೀರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಮತ್ತು ವಾಹನ ನಿಲುಗಡೆ ಸೌಲಭ್ಯವಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
ವಿಶ್ವ ಪ್ರಸಿದ್ಧ ಆಟಿಕೆಗಳ ನಗರ ಚನ್ನಪಟ್ಟಣ ಪಟ್ಟಣ (5 ಕಿಮೀ), ಕಣ್ವ ಅಣೆಕಟ್ಟು (8 ಕಿಮೀ), ರಾಮದೇವರ ಬೆಟ್ಟ ರಣಹದ್ದು ಅಭಯಾರಣ್ಯ (10 ಕಿಮೀ), ಕೆಂಗಲ್ ಹನುಮಂತಯ್ಯ ಟ್ರೀ ಪಾರ್ಕ್ (1 ಕಿಮೀ), ದೊಡ್ಡ ಏಕಶಿಲೆಯ ಬೆಟ್ಟದಂತಹ ಅನೇಕ ಪ್ರವಾಸಿ ಸ್ಥಳಗಳು ಸಮೀಪದಲ್ಲಿವೆ. ಏಷ್ಯಾ ಸಾವನದುರ್ಗ ಬೆಟ್ಟ (33 ಕಿಮೀ), ಜನಪದ ಲೋಕ (3 ಕಿಮೀ), ವಿಶ್ವ ಪ್ರಸಿದ್ಧ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಪ್ರತಿಮೆ (22 ಕಿಮೀ), ಶ್ರೀ ಸಂಜೀವರಾಯ ಸ್ವಾಮಿ ದೇವಸ್ಥಾನ (3 ಕಿಮೀ), ಶ್ರೀ ಕೆಂಗಲ್ ಹನುಮಂತಯ್ಯ ಸಮಾಧಿ (50 ಮೀಟರ್), ಅಪ್ರಮೇಯ ಸ್ವಾಮಿ ದೇವಸ್ಥಾನ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ ದೇವಸ್ಥಾನ (6 ಕಿಮೀ), ಕಬ್ಬಾಳಮ್ಮ ದೇವಸ್ಥಾನ (25 ಕಿಮೀ), ಮತ್ತು ಇನ್ನೂ ಅನೇಕ.
Google Map Link to Address: https://goo.gl/maps/gnEcoiCNJU9Q82sg7
Year of establishment: 2019-20
Distance from Temple: 100 meter
Nearby other tourist destinations:
ಸಮೀಪದ ಇತರ ಪ್ರವಾಸಿ ತಾಣಗಳು:
ವಿಶ್ವ ಪ್ರಸಿದ್ಧ ಆಟಿಕೆಗಳ ನಗರ ಚನ್ನಪಟ್ಟಣ ಪಟ್ಟಣ.(ದೇವಸ್ಥಾನದಿಂದ 5 ಕಿಮೀ ದೂರ)
ಕಣ್ವ ಅಣೆಕಟ್ಟು.(ದೇವಸ್ಥಾನದಿಂದ 8 ಕಿಮೀ ದೂರ)
ರಾಮದೇವರಬೆಟ್ಟ ರಣಹದ್ದು ಅಭಯಾರಣ್ಯ (ದೇವಸ್ಥಾನದಿಂದ 10 ಕಿಮೀ ದೂರ)
ಕೆಂಗಲ್ ಹನುಮಂತಯ್ಯ ಟ್ರೀ ಪಾರ್ಕ್.(ದೇವಸ್ಥಾನದಿಂದ 1ಕಿಮೀ ದೂರ)
ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟ ಸಾವನದುರ್ಗ ಬೆಟ್ಟ (ದೇವಾಲಯದಿಂದ 33 ಕಿಮೀ ದೂರ)
ಜನಪದ ಲೋಕ .(ದೇವಸ್ಥಾನದಿಂದ 3 ಕಿಮೀ ದೂರ)
ಜಗತ್ಪ್ರಸಿದ್ಧ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಪ್ರತಿಮೆ.(ದೇವಸ್ಥಾನದಿಂದ 22 ಕಿಮೀ ದೂರ)
ಶ್ರೀ ಸಂಜೀವರಾಯ ಸ್ವಾಮಿ ದೇವಸ್ಥಾನ .(ದೇವಸ್ಥಾನದಿಂದ 3 ಕಿಮೀ ದೂರ)
ಶ್ರೀ ಕೆಂಗಲ್ ಹನುಮಂತಯ್ಯ ಸಮಾಧಿ.(ದೇವಸ್ಥಾನದಿಂದ 50 ಮೀಟರ್ ದೂರ)
ಅಪ್ರಮೇಯ ಸ್ವಾಮಿ ದೇವಸ್ಥಾನ.(ದೇವಸ್ಥಾನದಿಂದ 6 ಕಿಮೀ ದೂರ)
ನದಿ ನರಸಿಂಹ ಸ್ವಾಮಿ ದೇವಸ್ಥಾನ.(ದೇವಸ್ಥಾನದಿಂದ 8 ಕಿಮೀ ದೂರ)
ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ ದೇವಸ್ಥಾನ.(ದೇವಸ್ಥಾನದಿಂದ 23 ಕಿಮೀ ದೂರ)
ಕಬ್ಬಾಳಮ್ಮ ದೇವಸ್ಥಾನ.(ದೇವಸ್ಥಾನದಿಂದ 25 ಕಿಮೀ ದೂರ)
ಅತಿಥಿ ಗೃಹ/ಯಾತ್ರಿ ನಿವಾಸ
1. ಯಾತ್ರಿ ನಿವಾಸ (14 ರೂಮುಗಳು)
Address:ಅಡ್ರೆಸ್: ಕೆಂಗಲ್ ಶ್ರೀ ಆಂಜನೇಯ ದೇವಸ್ಥಾನ,ವನ್ದರಗುಪ್ಪೆ ವಿಲೇಜ್,ಚನ್ನಪಟ್ಟಣ ತಾ,ರಾಮನಗರ
ಅಡ್ರೆಸ್: ಕೆಂಗಲ್ ಶ್ರೀ ಆಂಜನೇಯ ದೇವಸ್ಥಾನ,ವನ್ದರಗುಪ್ಪೆ ವಿಲೇಜ್,ಚನ್ನಪಟ್ಟಣ ತಾ,ರಾಮನಗರ
080-29911639