ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ವಸತಿ ಗೃಹ,ನಾಯಕನಹಟ್ಟಿ, ಚಿತ್ರದುರ್ಗ

  • ವರ್ಷದೊಳಗಿನ ಮಕ್ಕಳಿಗೆ ನ್ನು ಉಚಿತವಾಗಿ ಅನುಮತಿಸಲಾಗಿದೆ, ಆದರೆ 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವಯಸ್ಕರಿಗೆ ಶುಲ್ಕ ವಿಧಿಸಲಾಗುತ್ತದೆ.
  • ಪ್ರತಿ ಕೋಣೆಯಲ್ಲಿ ಇಬ್ಬರು ವಯಸ್ಕರು ಮತ್ತು ಒಂದು ಮಗುವಿಗೆ ಅವಕಾಶ ಕಲ್ಪಿಸಬಹುದು.
  • ಬಳಕೆದಾರರು ಗರಿಷ್ಠ 2 ಕೊಠಡಿಗಳನ್ನು ಬುಕ್ ಮಾಡಬಹುದು ಮತ್ತು ಗರಿಷ್ಠ 3 ದಿನಗಳವರೆಗೆ ಕೊಠಡಿಗಳನ್ನು ಬುಕ್ ಮಾಡಬಹುದು.
  • ಮರುಪಾವತಿ ಇಲ್ಲ ಮತ್ತು ರದ್ದತಿ ಇಲ್ಲ
  • ಕೊಠಡಿಗಾಗಿ ಮುಂಗಡ ಠೇವಣಿಯನ್ನು ನಗದು ರೂಪದಲ್ಲಿ ಸಂದಾಯ ಮಾಡಿ, ವ್ಯವಸ್ಥಾಪಕರಿಂದ ಪುನಃ ಮುಂಗಡ ಠೇವಣಿ ಹಣವನ್ನು ನಗದು ರೂಪದಲ್ಲಿ ಪಡೆದು ಈ ಬಗ್ಗೆ ಖಚಿತಪಡಿಸಿಕೊಳ್ಳುವುದು.
  • ಕೊಠಡಿಯೊಳಗೆ ಯಾವುದೇ ಆಹಾರ ಪದಾರ್ಥವನ್ನು ಒಯ್ಯವಂತಿಲ್ಲ.
  • ಯಾವುದೇ ಸರ್ಕಾರಿ ತುರ್ತು ಸಂದರ್ಭದಲ್ಲಿ, ಕೊಠಡಿ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ನಾವು ನಿಮ್ಮ ಹಣವನ್ನು ಮರುಪಾವತಿ ಮಾಡುತ್ತೇವೆ.
  • ಬೆಳಿಗ್ಗೆ 09:00 ರಿಂದ ಚೆಕ್-ಇನ್, ಮರುದಿನ 09:00 ರವರೆಗೆ ಚೆಕ್ಔಟ್ ಸಮಯ.

ದೇವಾಲಯದ ಬಗ್ಗೆ:

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನವು 15 ನೇ ಶತಮಾನದಿಂದ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿರುವ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಮೂರು ಉಪ ಸನ್ನಿಧಿಗಳನ್ನು ಹೊಂದಿದೆ. ಒಂದನೇಯದು ಒಳಮಠ, ಎರಡನೇಯದು ಹೊರ ಮಠ (ಜೀವೈಕ್ಯ ಸಮಾಧಿ),  ಮತ್ತು ಏಕಾಂತೇಶ್ವರ ಸನ್ನಿಧಿ, ನಾಯಕನಹಟ್ಟಿ ಕ್ಷೇತ್ರದ ಹೃದಯಭಾಗದಲ್ಲಿದೆ. ಇದು ಆಧ್ಯಾತ್ಮಿಕ ಗುರು ಪಂಚ ಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರುತಿಪ್ಪೇರುದ್ರಸ್ವಾಮಿಗಳ ಕಾಯಕ ಸ್ಥಳವಾಗಿರುತ್ತದೆ.

ಭಾರತೀಯ ಆಧ್ಯಾತ್ಮಿಕ ಗುರು ಮತ್ತು ಸಮಾಜ ಸುಧಾರಕ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಹಿಂದೂ ಮತ್ತು ಮುಸ್ಲಿಂ ಭಕ್ತರಿಂದ ಭಾವ್ಯಕ್ಯತೆಯಿಂದ ಕೂಡಿದ್ದು,  ಎರಡು ಧರ್ಮದೊಂದಿಗೆ ಹಾಗೂ ಸಕಲ ಎಲ್ಲಾ ಜಾತಿಯ ವರ್ಗಳಿಂದಲೂ ಪೂಜಿಸಲ್ಪಡುವ ಕ್ಷೇತ್ರವಾಗಿದೆ.  ಈ ಸ್ವಾಮಿಗಳು ಮಾಡಿದಷ್ಟು ನೀಡು ಭಿಕ್ಷೆ ಎಂಬ ಧೇಯ್ಯ ವಾಕ್ಯದಿಂದ ಕಂಗೂಳಿಸಿದವರು.  ಶ್ರೀ ಗುರುಗಳು ತಮ್ಮ ಕಾಲಾವಧಿಯಲ್ಲಿ ನಾಯಕನಹಟ್ಟಿ ಸುತ್ತಮುತ್ತ 5 ಕೆರೆಗಳನ್ನು, 5 ಪುರಗಳನ್ನು ನಿರ್ಮಿಸಿದ ಖ್ಯಾತಿ ಶ್ರೀಗಳಿಗೆ ಸಲ್ಲುತ್ತದೆ.

ಲಭ್ಯವಿರುವ ಸೌಲಭ್ಯಗಳು:
1. ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಅತಿಥಿ ಗೃಹವು 24 ಸಾಮಾನ್ಯ ಕೊಠಡಿಗಳನ್ನು ಹೊಂದಿದ್ದು, ಶೌಚಾಲಯ ಮತ್ತು ಸ್ನಾನದ ಕೋಣೆಗಳು, 24 ಗಂಟೆಗಳ ನೀರು ಸರಬರಾಜು ಇತ್ಯಾದಿಗಳನ್ನು ಹೊಂದಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
Contact Number: 9141012884
Email id: [email protected]

Google Map Link to Address: https://maps.app.goo.gl/WFMKxCYEv68qHNXD7

2. ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠ ವಸತಿ ಗೃಹಗಳು/ಯಾತ್ರಿ ನಿವಾಸವನ್ನು ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲಾಗಿದೆ. ಅತಿಥಿ ಗೃಹವು 24 ಕೊಠಡಿಗಳನ್ನು ಹೊಂದಿದ್ದು ಅದರಲ್ಲಿ 20 ಸಾಮಾನ್ಯ ಕೊಠಡಿಗಳು ಮತ್ತು 8 ಹಾಲ್ ಸೌಲಭ್ಯವನ್ನು ಹೊಂದಿದೆ. ಎಲ್ಲಾ ಕೊಠಡಿಗಳಿಗೆ ಹೊಂದಿಕೊಂಡಂತೆ ಶೌಚಾಲಯ ಮತ್ತು ಸ್ನಾನದ ಕೋಣೆಗಳು, 24 ಗಂಟೆಗಳ ನೀರು ಸರಬರಾಜು ಇತ್ಯಾದಿಗಳನ್ನು ಹೊಂದಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
Contact Number: 9141012886
Email id: [email protected]

Google Map Link to Address: https://maps.app.goo.gl/ppzibCvC2oGHkZja9

ಚಿತ್ರದುರ್ಗವು ನಾಯಕನಹಟ್ಟಿ ದೇವಸ್ಥಾನದಿಂದ ಸುಮಾರು 35 ಕಿಮೀ ದೂರದಲ್ಲಿದೆ. ಚಿತ್ರದುರ್ಗ ಕೋಟೆ, ವಾಣಿ ವಿಲಾಸ ಸಾಗರ್ ಅಣೆಕಟ್ಟು, ಹಿಡಿಂಬೇಶ್ವರ ದೇವಸ್ಥಾನ, ಚಂದ್ರವಳ್ಳಿ ಗುಹೆಗಳು ಮತ್ತು ಇನ್ನೂ ಅನೇಕ ಪ್ರವಾಸಿ ತಾಣಗಳು ದೇವಾಲಯದ ಸಮೀಪದಲ್ಲಿದೆ.

ವಿಳಾಸ: ಅಡ್ರೆಸ್: ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ನಾಯಕನಹಟ್ಟಿ ವಿಲೇಜ್, ಚಳ್ಳಕೆರೆ ತಾ, ಚಿತ್ರದುರ್ಗ

ದೂರವಾಣಿ: +91 91410 12884, +91 91410 12886

ಇಮೇಲ್: [email protected]